ಪವರ್ ಸ್ಟಾರ್ || ಪುನೀತ್ ರಾಜಕುಮಾರ್ ರವರ || ಸಾರಥ್ಯದಲ್ಲಿ || ಕನ್ನಡದ ಕೋಟ್ಯಧಿಪತಿ - 2019 || ಕ್ವೀಜ್ ಗೇಮ್ ಶೋ || ಪ್ರತಿ ಶನಿವಾರ || ಹಾಗೂ || ಬಾನುವಾರ ರಂದು || ರಾತ್ರಿ 8.00 ರಿಂದ || 9.30 ರವರೆಗೆ || ಕಲರ್ಸ್ ಕನ್ನಡ || ವಾಹಿನಿಯಲ್ಲಿ || ಪ್ರಸಾರ ವಾಗುತ್ತಿದೆ || ತಪ್ಪದೇ ವೀಕ್ಷಿಸಿ
ಪುನೀತ್ ರಾಜ್ ಕುಮಾರ್ ರವರೊಂದಿಗೆ 

"ಜೀವನದಲ್ಲಿ  ನನ್ನ  ಪಾಲಿನ  ಬಹು  ವರ್ಷಗಳ  ನಂತರದ  ಸಂಭ್ರಮ  ಅಂದರೆ  ತಪ್ಪಾಗಲಾರದು...
ಸತತ  ಪ್ರಯತ್ನ ಹಾಗೂ ನಿರಂತರವಾದ ಅಧ್ಯಯನದಿಂದ. ಕನ್ನಡದ ಕೊಟ್ಯಧಿಪತಿ - 2019 ಗೇಮ್ ಶೋಗೆ ಆಯ್ಕೆ ಆದೆ
ಆದ್ರೆ  ಮನುಷ್ಯ ತಾನೊಂದು ಬಗೆದರೆ ವಿಧಿ ಮತ್ತೊಂದು ರೀತಿ ಬಗೆಯಿತು  ನನ್ನ ಜೀವನದಲ್ಲಿ.
ಸುಮಾರು  20.000  ಜನರನ್ನ  ಹಿಂದಿಕ್ಕಿ  ಹೋಗಿದ್ದು  ಸಾಧಾರಣ  ಕೆಲಸವಾಗಿರಲಿಲ್ಲ.
12 ಎಪ್ರಿಲ್‌ 2019  ರಿಂದ  ಜರ್ನಿ  ಆರಂಭವಾಗಿದ್ದು....31 ಅಗಸ್ಟ್  2019  ಕ್ಕೆ   ಮುಗಿಯುತ್ತೆ"
 
ಮುಂದೆ ಓದಿ........
ಏಪ್ರಿಲ್ 20 ರಿಂದ  https://www.facebook.com/colorskannada/?hc_ref=ART9RlPcWkvuDDpnNjcfBxws2yNEnGVp88oL0BIHFbu19xkqRSM4A5LAqbJLeKkyYxc&fref=nf&__xts__[0]=68.ARAq-7sjih8r2CraqcPwAURajrlFxYGQNEhwusQrFfiqK5RizWM_1NfHq8CSCp4v9maXbQfjgprYZAdNhksN95SatXban63vDZoUoz1yqYb6m9mpZ5uHNitaJrwbaKBiDEgl_w-Udf2CaRnWTByC6BxL3wWbKdK0AVcvNxgePOzVam2zoRj3ZF3wU3Zjd4w09mNN0Qfd6gFbxwM1ez2fhDwEtQDM3AMJtpi0dvuw5iWFOTXrYEdGsoaM81uJDUuW1eVNn60QYx6-Q37F2PwJdVXEU7pwu7oJphTLbhIO7Ani7F1HHpTCunYQuzXyxOscF3bUBjQpz_uKXMCP6LYJ2E4zok_yMQCiGkg&__tn__=kC-R   TV ಯಲ್ಲಿ ಪ್ರಶ್ನೆಗಳನ್ನು  ಕೇಳಲು ಆರಂಬಿಸಿದ್ದರು. ನಾನು  ಸತತವಾಗಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುತ್ತಾ ಮೆಸೇಜ್  ಮಾಡುತ್ತಿದ್ದೆ.

2019 April 24 ಸಂಜೆ 4  ಗಂಟೆಗೆ  ನನಗೊಂದು ಪೋನ್ ಬಂತು, ನಾನಾಗ  ಬೈಕ್ ಓಡಿಸುತ್ತಿದ್ದೆ ಸಡನ್  ಆಗಿ ಬಂದ ಕಾಲ್ ಸ್ವಲ್ಪ ವಿಚಲಿತನಾದೆ. 
ಬ್ಯೆಕ್ ನ್ನು ಪಕ್ಕಕ್ಕೆ  ಹಾಕಿ ಹಲೋ ಅಂದೆ.
ತಮಿಳು ಮಿಶ್ರಿತ ಭಾಷೆಯಿಂದ ಅತ್ತಲಿಂದ ಮಾತನಾಡುತ್ತಿದ್ದರು. ಕಾರ್ಯಕ್ರದಲ್ಲಿ ಬಾಗವಹಿಸಬೇಕಾದರೆ  Terms and Conditions ಸರಿಯಾಗಿ ಓದಲು ಹೇಳಿ ಅದರಂತೆ ನೆಡೆದುಕೊಳ್ಳಲು ಸಲಹೆ ನೀಡಿದರು  ಹೆಸರು, ವಿಳಾಸ, ಮೊಬೈಲ್ ನಂಬರ್, ಹಾಗೂ  ವಯಸ್ಸು ಪಡೆದುಕೊಂಡು ಮೊದಲಿನ ರೌಂಡಿನಲ್ಲಿ ರ‌್ಯಾಂಡಮ್ ಆಗಿ ಸೆಲೆಕ್ಟ್ ಆಗಿದಿರಾ ನಿಮಗೆ ಕಂಗ್ರಾಟ್ಸ್ ಅಂದ್ರು.
ನಂತರ IVR ಗೆ ನನ್ನ ಕರೆಯನ್ನ ವರ್ಗಾಯಿಸಿದರು.  ಒಟ್ಟು ಮೂರು ಪ್ರಶ್ನೆಗಳನ್ನು ಕೇಳಲಾಯ್ತು
ಉತ್ತರವನ್ನು ಮೊಬ್ಯೆಲ್ ಕೀ ಪ್ಯಾಡ್ ಉಪಯೋಗಿಸಿ ಬಟನ್ ಪ್ರಸ್ ಮಾಡಿ ಉತ್ತರ ಕೊಡಬೇಕಿತ್ತು. ನಾನು ಅದನ್ನು ಮಾಡಿ ಮುಗಿಸಿದೆ
ನಂತರ ಮತ್ತೆ ಎಪ್ರೀಲ್ 28, 2019 ರಂದು ಕರೆ ಬಂದು ನೀವು ಎರಡನೇ ರೌಂಡಿಗೆ ಸೆಲೆಕ್ಟ್ ಆಗಿದ್ದು,  ಕನ್ನಡದ ಕೊಟ್ಯಧಿಪತಿ ಕಾರ್ಯಕ್ರಮದ ಅಡೀಶನ್ಗೆ ಆಯ್ಕೆ ಆಗಿರುತ್ತೀರಿ. 
ಮೇ 9 ರಂದು ದಾವಣಗೆರೆಯ ವಿದ್ಯಾನಗರದಲ್ಲಿರೋ ಮಾಗನೂರು ಬಸಪ್ಪ  (ಶಾಲೆ) ಅವರ ಟ್ರಸ್ಟ್ ನಲ್ಲಿ ನೆಡಯುವ ಅಡೀಶನ್ಗೆ ನೀವು ಬರಬೇಕು ಅಂದರು
ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್. ಅನುಭವ ಮಂಟಪ ವಿದ್ಯಾನಗರ ಮೇನ್ ರೋಡ್ 
ಇಲ್ಲಿಗೆ ಬೆಳಿಗ್ಗೆ 7 ರಿಂದ, 9 ಗಂಟೆಯೊಳಗೆ ಮಾತ್ರ ಪ್ರವೇಶವಿರುತ್ತೆ ತದನಂತರ ಬಂದರೆ ಪ್ರವೇಶವನ್ನು ನಿರಾಕರಿಸಲಾಗುತ್ತೆ.  ಅಡೀಶನ್ಗೆ ಬರುವ ಎಲ್ಲಾ ಖರ್ಚು ನಿಮ್ಮದೇ ಆಗಿರುತ್ತೆ. 
ಬರುವಾಗ ನಿಮ್ಮ ಇತ್ತಿಚಿನ ನಾಲ್ಕು ಭಾವಚಿತ್ರ ಹಾಗೂ ನಿಮ್ಮ ಪೋನ್ ಇನ್ ಫ್ರಂಡ್ ನ  ಮೊಬ್ಯೆಲ್ ನಂಬರ್ ನೊಂದಿಗೆ ನಿಮ್ಮ ವಿಳಾಸದ ಹಾಗೂ ವಯಸ್ಸಿನ ದಾಖಲೆಗಳನ್ನ ತಪ್ಪದೇ ತರಬೇಕೆಂದು ಹೇಳಿದರು. AUDITION ನಲ್ಲಿ ನೀವು SELECT ಆದರೆ ಮುಂದೆ ನೆಡೆಯುವ ಆಗಸ್ಟ್ ತಿಂಗಳಲ್ಲಿ  ಶೂಟಿಂಗ್ ಗಾಗಿ ನಿಮಗೆ ಫೋನ್ ಮಾಡುತ್ತೇವೆ ಅಂದರು.
9 ಮೇ  2019 ಬುಧವಾರ  ಬೆಳಿಗ್ಗೆ 6 ಕ್ಕೆ. ಸಿದ್ದವಾಗಿ ಬ್ಯೆಕನ್ನೇರಿ ಡೆಂಟಲ್ ಕಾಲೇಜ್ ರೂಡ್ ಮುಖಾಂತರ ಹೊರಟೆ.
ತಲೆಯಲ್ಲಿ ಒಂದೇ ಓಡುತ್ತಿತ್ತು.......
ನಾನು ಇಂದು ನೆಡೆಯುವ ಅಡೀಶನ್ ನಲ್ಲಿ ನಾನು ಗೆಲ್ತಿನಾ?
ಫ್ಯೆನ್  ಅಂಡ್  ಆರ್ಟ್ ಕಾಲೇಜ್  ROAD ತಿರುವಿವನ್ನು ಬಳಸಿ ಮುಂದೆ ವಿದ್ಯಾನಗರದ ಸರ್ಕಲ್ ದಾಟಿಕೋಂಡು ಮುಂದೆ ಹೋದೆ.
ಮಾಗನೂರು ಬಸಪ್ಪ  ಹ್ಯೆಸ್ಕೂಲ್ ಎಡಬಾಗದಲ್ಲಿತ್ತು. ಅಲ್ಲಿನ ವಾಚ್ ಮೆನ್ ಸರ್ ಹಿಂದಿನಿಂದ ಹೋಗಿ ಎಲ್ಲಾ ಅಲ್ಲಿಂದಲೇ ಹೋಗ್ತಾ ಇರೋದು ಅಂದ.
ಹೋಗಿ ನೋಡ್ತಿನಿ ಜನ ಜಾತ್ರೆ ನರೆದಿತ್ತು. 
ರಾಜ್ಯದ ಮೂಲೆ ಮೂಲೆಯಿಂದ  ಈ AUDITION ನಲ್ಲಿ ಭಾಗವಹಿಸಲು ಜನರು ಬಂದಿದ್ದರು.

ಗಂಡು ಹಾಗೂ ಹೆಣ್ಣು ಮಕ್ಕಳಿಗೆ  ಪ್ರತ್ಯೇಕ ಸಾಲು ನಿರ್ಮಾಣ ಮಾಡಿದ್ದರು.ಎಲ್ಲವೂ ಅಚ್ಚುಕಟ್ಟಾಗಿಯೇ ಮಾಡಿದ್ದರು. 
ಹೊಸ ಅನುಭವ ಈ   ಕಾರ್ಯಕ್ರಮದಲ್ಲಿ   ಭಾಗವಹಿಸುತ್ತಿರುವವರಲ್ಲಿ  ಎದ್ದು ಕಾಣುತ್ತಿತ್ತು.    
ಏನೋ ಕೂತೂಹಲ. ಏನೋ ವಿಶೇಷವಾದ ಹೆಮ್ಮೆ ಎನಿಸುತಿತ್ತು.  ಎಲ್ಲರೂ ಸರತಿ ಸಾಲಿನಲ್ಲಿ ಪ್ರವೇಶ ಪಡೆಯಬೇಕಾಗಿತ್ತು.
ಅಡೀಶನ್ ನೆಡೆಯುವ   ಸ್ಥಳ
ಕಲರ್ಸ್ ಕನ್ನಡದ ಸಿಬ್ಬಂಧಿಗಳು ಹಾಗೂ ಕನ್ನಡದ ಕೊಟ್ಯಧಿಪತಿ ಕಾರ್ಯಕ್ರಮದ ಆಯೋಜಕರು ಸುತ್ತುವರೆದಿದ್ದರು. ಪ್ರತಿಯೋಬ್ಬರಿಗೂ ಗ್ಯೆಡ್ ಮಾಡುತ್ತಿದ್ದರು ನಿಮ್ಮ ಕ್ಯೆಯಲ್ಲಿ ಯಾವುದಾದರೂ ಐಡಂಟಿಟೀ ಕಾರ್ಡ್ ಹಿಡಿದು ಸಾಲಾಗಿ ಮುಂದೆ ಬನ್ನಿ. 
ಹೆಚ್ಚಿನವರೂ ಆಧಾರ್ ಕಾರ್ಡ್ ನ್ನೇ  ಪ್ರಮುಖ ದಾಖಲಾತಿಯನ್ನಾಗಿ ತಂದಿದ್ದರು. ನಾನು ಸಹ ಆಧಾರ್ ನ್ನೇ ಕ್ಯೆಯಲ್ಲಿ ಹಿಡಿದಿದ್ದೆ.  ಅಷ್ಟೇ ಅಲ್ಲ ನಾನು  ನನ್ನ ಹಿಂದಿನವರನ್ನೂ ಮುಂದಿರುವವರನ್ನೂ ವಿಚಾರಿಸುತ್ತಿದ್ದೆ 
ಇದೇ ಮೋದಲ ಸಲವಾ?
ಅಡೀಶನ್ಗೆ ಬರ್ತಾ ಇರೋದು?
ಎಲ್ಲಿಂದ ಬರ್ತಾ ಇದಿರಾ ?
ಯಾವಾಗ್ ಬಂದ್ರಿ ದಾವಣಗೆರೆಗೆ?
ಅಂತೆಲ್ಲಾ ಅವರ ಅನುಭವಗಳನ್ನ ಕೇಳಿ ತಿಳಿದುಕೊಳ್ಳುತ್ತಿದ್ದೆ.
ಕೆಲವರಂತೂ ಈ ಕಾರ್ಯಕ್ರಮ ದಲ್ಲಿ ಭಾಗವಹಿಸುವುದಕ್ಮಾಗಿ   ಬೆಳಗಾಂ. ಬಳ್ಳಾರಿ. ಬೀದರ್, ಕಾರವಾರ, ರಾಯಚೂರ್, ಚಿತ್ರದುರ್ಗ, ಮತ್ತೆ ಕೆಲವರೂ ಮಂಗಳೂರಿನಿಂದ ಬಂದಿದ್ದರು.
ನಾನಂತೂ ಮೊಬ್ಯೆಲ್ ನಲ್ಲಿ ನನಗಿಷ್ಟವಾಗೋ ಪೋಟೋಸೆರೆ ಹಿಡಿಯುವತ್ತ ಗಮನಹರಿಸಿದ್ದೆ.
ಅವೆಲ್ಲವನ್ನು  ಸೇವ್ ಮಾಡಿಕೊಳ್ಳಲು ನಾನು ಬಳಷ್ಟು  ಪ್ರಯತ್ನ ಪಡುತ್ತಿದ್ದೆ
ಒಟ್ಟಿನಲ್ಲಿ ನಾನಂತೂ ತೂಂಬಾ ಕೂತೂಹಲದಿಂದ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೆ.
ನನ್ನ ಸರದಿ ಬರುವವರೆಗೂ ವಿಡಿಯೋ  ರೆಕಾರ್ಡ್ ಮಾಡುವುದರಲ್ಲಿ ನಿರತನಾಗಿದ್ದೆ.  ಅಲ್ಲಿನ ಸಿಬ್ಬಂದಿಯೊಬ್ಬ ಬಂದು  ಇಲ್ಲಿ  ರೆಕಾರ್ಡ್ ಮಾಡಬೇಡಿ ಪ್ಲೀಜ್ ಅಂದ್ರು.
ರಿಜಿಸ್ಟರ್ ಮಾಡಿಕೊಳ್ಳುತ್ತಿರುವುದು
ನನ್ನ ಮೊಬ್ಯೆಲ್ ನಂಬರ್ CONFORM  ಮಾಡಿ ಆಧಾರ್ ನಲ್ಲಿರುವಂತೆ ವಿಳಾಸದ ಪುರಾವೆಯನ್ನ ನೀಡಿದ ಮೇಲೆ ನನಗೊಂದು ಐಡಂಟಿಟೀ ನಂಬರ್ ಕ್ರಿಯೇಟ್ ಮಾಡುತ್ತಾರೆ. ಅದೇ DVG - 699
ನನ್ನ ರಿಜಿಸ್ಟರ್ ನಂಬರ್
ಅಲ್ಲಿಂದ ನೇರವಾಗಿ ಒಳಗಡೆ ಪ್ರವೇಶ ಸಿಗುತ್ತೆ.
ಅಲ್ಲಿ ಹೆಜ್ಜೆ ಹೆಜ್ಜೆಗೂ ಸಹಾಯಕರಿರುವದರಿಂದ ಎಲ್ಲಿಯೂ ತಪ್ಪಾಗದಂತೆ ಸರಾಗವಾಗಿ ಎಲ್ಲವೂ ನೆಡೆಯುತ್ತಲೇ ಸಾಗುತ್ತದೆ.
ಒಳಗಡೆ ಒಟ್ಟು ಹನ್ನೊಂದು ಸಾಲುಗಳನ್ನು ನಿರ್ಮಾಣ ಮಾಡಿದ್ದರು.
ಸರತಿ ಸಾಲಿನಲ್ಲಿ ನಿಂತು ಬುಕಲೇಟ್ಗಗಳನ್ನು ಪಡೆಯುತ್ತಿರುವುದು
ಪ್ರತಿಯೋಂದು ಸಾಲಿಗೆ ನೂರು ಜನರಂತೆಯೋ   ಏನೋ ಗೊತ್ತಿಲ್ಲ 
ಖಚಿತವಾಗಿ ಸಾವಿರಕ್ಕಿಂತ ಹೆಚ್ಚು ಜನರು ಈ  ಕನ್ನಡದ ಕೊಟ್ಯಧಿಪತಿ ಗೇಮ್ ಶೋ ಗೆ  ಈ  ದಾವಣಗೆರೆಯಲ್ಲಿ   ಎರಡನೇ ಬಾರಿ ನೆಡೆಯುತ್ತಿರುವ  ಅಡೀಶನ್ ಗೆ ಬಂದಿದ್ರು.
ಪ್ರತಿಯೋಬ್ಬರಿಗೂ ಹಲವಾರು ಪುಸ್ತಕಗಳನ್ನು ಒಳಗೊಂಡ ಒಂದ್ ಫ್ಯೆಲ್ ನೀಡುತಿದ್ದರು
ಪೈಲಗಳು
ಹಾಗೆಯೇ ಅವರ ರೂಂ ನಂಬರ್ ಖಚಿತ ಪಡಿಸಿ ಅಲ್ಲಿಗೆ ತೆರಳಲು ಸೂಚಿಸುತ್ತಿದ್ದರು  ಓಟ್ನಲ್ಲಿ ಅಚ್ಚುಕಟ್ಟಾಗಿ ಈ ಕಾರ್ಯಕ್ರಮ ವನ್ನು ನೆಡಸಿಕೊಡುವಲ್ಲಿ ಇಡೀ ತಂಡ ನಿರತವಾಗಿತ್ತು.
ಸರತಿ ಸಾಲಿನಲ್ಲಿ ನಿಂತವರ ಐಡಂಟೀಟಿ ಕಾರ್ಡ್ ಗಳನ್ನ ವೆರಿಫ್ಯೆ ಮಾಡಿ ರೂಂ ನಂಬರ್ ಅಲಾಟ್ ಮಾಡುತಿದ್ದರು. ನಾವು ಅಡೀಶನ್ಗೆ ಸೆಲೆಕ್ಟ್ ಆಗುವ ಮುನ್ನ ಕೊಟ್ಟ .ಮಾಹಿತಿಗೂ ಈಗ ಹಾರ್ಡ್ ಕಾಪಿನಲ್ಲಿರೋ  ಮಾಹಿತಿಗೂ  ಕ್ರಾಸ್ ವೆರಿಫ್ಯೆ ಮಾಡಿಯೇ ನಮ್ಮನ್ನು ಎಕ್ಜಾಮ್ ರೂಂ ಕಳುಹಿಸುತ್ತಿದ್ದರು.
ನನಗೆ ಕೊಟ್ಟ ರೂಂ ಸಂಖ್ಯೆ 39.  ಒಟ್ಟು ಮೂವತ್ತು ಜನರಿಂದ ರೂಂ ತುಂಬಿತ್ತು. ಕಾಲೇಜಿನ ಆವರಣದಲ್ಲಿಯೇ ತಿಂಡಿ ಕಾಫಿಗೆ ವ್ಯವಸ್ಥೆ ಮಾಡಲಾಗಿತ್ತು. ಸಮಯವಾಗಲೇ ಒಂಬತ್ತು ದಾಟಿತ್ತು,
ಟಿಫನ್ ಮುಗಿಸಿ ಬಂದಾದ ಮೇಲೆ ಒಬ್ಬ ಲೇಡಿಗೆ ಉಸ್ತುವಾರಿಯನ್ನು ನಮ್ಮ ರೂಂ ಕಂಟ್ರೋಲ್ ವಹಿಸಲಾಗಿತ್ತು . ನಮಗೆಲ್ಲಾ ಬಹಳ ಆತ್ಮೀಯವಾಗಿ ಅಡೀಶನ್ ಉದ್ದೇಶವನ್ನು ಹೇಳುತ್ತಾರೆ. ಮೇಲಿಂದ ಮೇಲೆ ಕನ್ನಡದ ಕೊಟ್ಯಧಿಪತಿ ಯ ಉಸ್ತುವಾರಿಯನ್ನು ವಹಿಸಿದ್ದ   ಕಲರ್ಸ್ ಕನ್ನಡ ವಾಹಿನಿಯ ಸದಸ್ಯರು ಆಗಾಗ ಬಂದು ನಮಗೆ ಕೊಟ್ಟಿರುವ ಪ್ರತಿಯೊಂದು ಬುಕ್ಕ್ ಲೇಟ್ಗಳ ಬಗ್ಗೆ ಬಹಳ ಆಳವಾದ ಮಾಹಿತಿಯನ್ನ ಮನಮುಟ್ಟುವಂತೆ ಹೇಳಿಹೊಗುತ್ತಿದ್ದರು. ಕೆಲವೊಂದು ಬುಕ್ಲೆಟ್ಗಳ ಮೇಲೆ ಸುಮಾರು ನೂರಕ್ಕೂ ಹೆಚ್ಚು ಸಹಿ ಮಾಡಬೇಕಿದೆ, ಅಗ್ರೀಮೆಂಟ್ ಅಂತ ಅಂದ್ಕೊತಿನಿ ನಾನು. ಹೇಗಿರಬೇಕು ಹೇಗಿರಬಾರದು. ಏನ್ ಮಾಡಬೇಕು ಏನ್ ಮಾಡಬಾರದು ಅನ್ನುವುದೇ ಆಗಿರುತ್ತೆ.
ಇನ್ನೂ ನಾವು ಡಿಕ್ಲೇರೇಶನ್ ಮಾಡ್ಕೊಬೇಕಾಗಿರುತ್ತೆ ಹೆಸರು. ಹುಟ್ಟಿದ ದಿನಾಂಕ.ವಿಳಾಸ. ಮೊಬ್ಯೆಲ್ ನಂಬರ್. ಖಚಿತ ಪಡಿಸಬೇಕು. ಫೋನ್ ಇನ್ ಫ್ರಂಡ್ ಆಗಿ ನಾವು ಯಾರನ್ನ. ಹೆಸರಿಸುತ್ತೇವೆಯೋ ಅವರ ಬಗ್ಗೆ ವಿವರ ಬರೆದು ಅವರ ಫೋಟೋ ಹಾಗೂ ಅವರ ಮೊಬೈಲ್  ನಂಬರ್ ಬರೆಯಬೇಕು ಅವರ ಬಗ್ಗೆ ಕಿರು ಪರಿಪರಿಚಯವನ್ನು ಮಾಡಿಕೊಡಬೇಕು.
ನಂತರ ಒಬ್ಬ ಕಂಟಸ್ಟೇಂಟ್ ಕುರಿತಾಗಿ ಸಮಗ್ರವಾದ ವ್ಯಕ್ತಿತ್ವದ ಬಗ್ಗೆ ಕುರಿತಾದ ಹತ್ತು ಹಲವು ಪ್ರಶ್ನೆಗಳಿರುತ್ತವೆ ಈ ಕೆಳಕಂಡ  ಪೋಟೋದಲ್ಲಿರುವಂತೆ ಇರುತ್ತವೆ.
ಪ್ರಶ್ನೆಗಳು
ಅಷ್ಟೊತ್ತಿಗೆ ಸಮಯ ಮದ್ಯಾನ ಎರಡು ದಾಟಿರುತ್ತೆ. ನಂತರ ಬರುವುದೇ ಕ್ವಶ್ಚನ್ ಪೇಪರ್  ಹಾಳೆಯಲ್ಲಿ ಮುದ್ರಿಸಿದ ಒಟ್ಟು ಇಪ್ಪತ್ತು ಪ್ರಶ್ನೆಗಳಿರುತ್ತೆ  ಮತ್ತು ನಾಲ್ಕು ಉತ್ತರಗಳ OPTION ಇರುತ್ತವೆ ನಾವು ಕೇವಲ ಸರಿಯಾದ ಉತ್ತರದ ಬಾಕ್ಸ್ ಫಿಲ್ ಮಾಡಬೇಕು.ಅಲ್ಲಿ ಕೊಟ್ಟಿರುವ ಪ್ರಶ್ನೆಗಳು ಸಾಮಾನ್ಯ ಜ್ಞಾನಕ್ಜೆ ಸಂಬಂಧಿಸಿದಂತೆ ಇರುತ್ತವೆ. ವಾತಾವರಣ ಶುಧ್ಧ ಪರೀಕ್ಷಾ ಕೊಠಡಿಯಂತಾಗಿ ಮಾರ್ಪಾಡು ಆಗುತ್ತದೆ. ಪ್ರಶ್ನೆ ಪತ್ರಿಕೆ ಒಬ್ಬರಿಗೆ ಇದ್ದಂತೆ ಮೊತ್ತಬ್ಬರಿಗೆ ಇರುವುದಿಲ್ಲ. ಪ್ರಶ್ನೆಗಳ ಸಂಖ್ಯೆಗಳು ಬದಾಲಾಗಿರುತ್ತವೆ ಒಟ್ಟು ಇಪತ್ಪತ್ತು ಪ್ರಶ್ನೆಗಳು ಅವೇ ಎಲ್ಲರಿಗೂ ಇರುತ್ತವೆ. ರೂಂ ಸೂಪರವ್ಯೆಜರ್ ಹೇಳುತ್ತಿರುತ್ತಾರೆ ಕಾಪಿ ಮಾಡಬೇಡಿ ಇನ್ನೊಬ್ಬರನ್ನ ನೊಡ್ಕೊಂಡು ಬರೀಬೇಡ್ರಿ. ತಪ್ಪಾದ್ರೂ ಪರ್ವಾಗಿಲ್ಲ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ. ನೀವು ಇದರಿಂದಲೇ ಸೆಲೆಕ್ಟ್ ಆಗ್ತಿರಾ ಅಂತ ನಾನು ಭಾವಿಸೋಲ್ಲ...ನಿಮ್ಮ ನಿಜಾವಾದ ಪರೀಕ್ಷೆ ವಿಟಿಯಲ್ಲಿರುತ್ತೆ ಅಂತ ನಾನು ಹೇಳ್ತಿನಿ ಅಂತಾ ಹೇಳ್ತಾ ಇರ್ತಾ ಇದ್ರು.
ಊಟದ ಸಮಯವಾಗಿತ್ತು ಕನ್ನಡದ ಕೊಟ್ಯಧಿಪತಿ - 2019  ಕಾರ್ಯಕ್ರಮದ ಆಯೋಜಕರು ಅದ್ಬುತವಾ ವ್ಯವಸ್ಥೆಯನ್ನು ಮಾಡಿದ್ದರು. ಈ ಅಡೀಶನ್ಗೆ ಬಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಒಂದೋಂದು ವಾಟರ್ ಬಾಟಲ್ ನ್ನು ನೆನಪಿನ ಕಾಣಿಕೆ ನೀಡುತ್ತಿದ್ದರು ಕಲರ್ಸ್
ಕಲರ್ಸ್ ಕನ್ನಡ ವಾಹಿನಿಯ  GIFT
ಕನ್ನಡ ವಾಹಿನಿಯವರು. ನಮ್ಮ ರೂಂ ನಲ್ಲಿ ಟೆಕ್ನಿಶಿಯನ್ಗಳು ಕ್ಯಾಮರಾ ಫಿಕ್ಸ್ ಮಾಡುತ್ತಿದ್ದರು. ಅಷ್ಟರೊಳಗಾಗಿ ರ‌್ಯೆಟಿಂಗ್ ಪರೀಕ್ಷೆ ಮುಗಿಯುತ್ತಾ ಬಂದಿತ್ತು. ಎಲ್ಲಾ ಅಭ್ಯರ್ಥಿಗಳಿಂದ ಉತ್ತರಪತ್ರಿಕೆಗಳನ್ನ ಕಲೆಕ್ಟ್ ಮಾಡಿಕೊಳ್ಳುತ್ತಿದ್ದರು.
ಕಾಲೇಜ್ ನ ಒಳಗಡೆಯ ಬಯಲಿನಲ್ಲಿ ಬಹುದೊಡ್ಡ ಶ್ಯಾಮಿಯಾನಗಳನ್ನ ಹಾಕಿದ್ದರು...
V T ಮಾಡಲಿಕ್ಕಾಗಿ ಕಾಯುತ್ತಾ ಕುಳಿತುಕೊಂಡಿರುವುದು
ಊಟ ಮುಗಿಸಿ ಬಂದಾದ ಮೇಲೆ ಅಲ್ಲಿ ಕುಳಿತಿರಬೇಕಾಗಿತ್ತು ಕೊನೆಯದಾಗಿ ವಿಟಿ ಮಾಡಲಿಕ್ಕಾಗಿ ( ವಿಡಿಯೋ ರೆಕಾರ್ಡಿಂಗ್) ಅಚ್ಚುಕಟ್ಟುತನಕ್ಕೆ ಅತ್ಯಂತ ಹೆಸರುವಾಸಿಯಾದ ಕಾರ್ಯಕ್ರಮ ಅಂದರೆ ಇದೇ ಇರಬೇಕು. ಎಲ್ಲಿಯೂ ಲೋಪ ದೋಷಗಳಾಗದಂತೆ ಪ್ರತಿಯೊಂದು ಕೆಲಸಗಳನ್ನ ಬಹಳ ವ್ಯವಸ್ಥಿತವಾಗಿ ಮಾಡಿ ಮುಗಿಸುತ್ತಿದ್ದರು ಆಯೋಜಕರು.
ಪುನೀತ್ ರಾಜ್ಕುಮಾರ್ ರ ದೊಡ್ಡದಾದ ಕಟೌಟ ಹಾಕಿ ಅದರ ಮುಂದೆ ಮ್ಯೆಕ್ ಫಿಕ್ಸ್ ಮಾಡುವಲ್ಲಿ ನಿರತರಾಗಿದ್ದರು. ನಾವುಗಳೆಲ್ಲಾ ಇಲ್ಲಿಯೇ ವಿಡಿಯೋ ರೆಕಾರ್ಡ್ ಮಾಡಬೇಕಾಗಿರುವುದು.
ಪುನೀತ್ ರಾಜಕುಮಾರ್ ರವರ ಕಟೌಟರ್
ಪ್ರತಿಯೋಬ್ಬ ಕಾಂಟೆಸ್ಟ ಗೆ ಕಡಿಮೆ ಏಂದರೂ ಹದಿನೈದು ನಿಮಿಷದಿಂದ ಇಪ್ಪತ್ತು ನಿಮಿಶಗಳವರೆಗೆ ಅಲ್ಲಿ ನಿಂತು ರೆಕಾರ್ಡ್ ಮಾಡಬೇಕು. ಎಲ್ಲಾ ಸ್ಪರ್ದೀಗಳು ತಮ್ಮ ಸರದಿಗಾಗಿ ಕಾದು ಕುಳಿತಿದ್ದರು. ಒಟ್ಟು ಸ್ಪರ್ದೀಗಳ ರಿಜಿಸ್ಟರ್ ನಂಬರ ಗಳನ್ನ ರ‌್ಯಾಂಡಮ್ ಆಗಿ ಕರೆಯಿತ್ತಿದ್ದರು. ಸಾವಿರ ಕ್ಕಿಂತಲೂ ಹೆಚ್ಚಿಗೆಯಾಗಿದ್ದ ಸ್ಪರ್ದೀಗಳಿಗೆ ಕಾಯುವುದೇ ಕೆಲಸವಾಗಿತ್ತು. ಪ್ರತಿಯೋಂದ ಕೊಣೆಯಲ್ಲೂ ವಿಡಿಯೋ ರೆಕಾರ್ಡ್ ಆಗುತ್ತಿತ್ತು. ಕನ್ನಡದ ಕೊಟ್ಯಧಿಪತಿಯ ಅಡೀಶನ್ ನಲ್ಲಿ ಭಾಗವಹಸಿದ ಪ್ರತಿಯೋಬ್ಬ ಸ್ಪರ್ದಿಯೂ ಸಹ ಅತ್ಯಂತ ಶ್ರಧ್ದೆಯಿಂದ ತನಗೆ ತಿಳಿದಂತೆ ಪುನೀತ್ ರಾಜ್ಕುಮಾರ ರವರ ಹಾಡು ಡ್ಯಾನ್ಸ್ ಡ್ಯೆಲಾಗ್ ಇತ್ಯಾದಿ ಅವರವರ ಬುದ್ದಿವಂತಿಕೆಗೆ ತಕ್ಕಂತೆ ಕೌಶಲ್ಯವನ್ನು ಪ್ರದರ್ಶೀಸುತ್ತಿದ್ದರು ಮುಚ್ಚಿದ ಕೋಣೆಯೋಳಗೆ.
ನನ್ನ ಸರದಿ ಬಂತ ಸಂಜೆ 6.30ಕ್ಕೆ  ಅಷ್ಟರೋಗಾಗಲೇ ಹಲವಾರು ಫೋನ್ಗಳು ಬಂದಿದ್ದವು ನನಗೆ ಹೇಗಾಯ್ತು ಏನಾಗ್ತಾ ಇದೆ ಅಂತೆಲ್ಲಾ ವಿಚಾರ ಮಾಡ್ತಾ ಇದ್ರೂ ಮನೆಯವರು ಹಾಗೂ ಹಿತ್ಯೆಸಿಗಳು.

ರೂಂ ನಂಬರ್ 39ರಲ್ಲಿ 699 ಸಂಖ್ಯೆಯನ್ನು ಕೂಗಿ ವೆಂಕಟೇಶ್ ಬಾರ್ಕಿ ಇದಿರಾ? ಅಂದ್ರು
ಯಸ್ ನಾನಿಲ್ಲೇ ಇದಿನಿ ಮೆಡಂ ಅಂದು ಡೋರ್ ತಳ್ಳಿಕೊಂಡು ಒಳಗಡೆ ಹೋದೆ.
ನನಗೆ ಕಾಣಿಸಿದ್ದು ಕ್ಯಾಮರಾ ಮೆನ್ ಹಾಗೂ ನಿರೂಪಕಿಯಾಗಿದ್ದ ನಮ್ಮ ರೂಂನ ಮೇಲುಸ್ತುವಾರಿ ವಹಿಸಿದ್ದ ಮೆಡಂ.
(ಹೆಸರು ತಿಳಿದಿಲ್ಲ).

ಲ್ಯಾಪ್‌ಟಾಪ್ ಮುಂದೆ ಕುಳಿತು ನನ್ನ ಬಯೋಡಾಟವನ್ನ ಮತ್ತೊಮ್ಮೆ ಕನಫರ್ಮ ಮಾಡಿಕೊಂಡು ಹೇಳಿ ವೆಂಕಟೇಶ್ ಎಲ್ಲಿಂದ ಬಂದಿರೋದು? ನಿಮ್ಮ ಬಗ್ಗೆ ನಿಮ್ಮ ಈ ಜರ್ನಿಯ ಬಗ್ಗೆ. ನಿಮ್ಮ ಮನೆಯವರ ಬಗ್ಗೆ ನಿಮ್ಮ ಬಾಲ್ಯದ ಬಗ್ಗೆ. ನಿಮ್ಮ ಉದ್ಯೋಗ ದ ಬಗ್ಗೆ. ನೀವು ನಿಮ್ಮ ಮನದಾಳಸ ಮಾತುಗಳ ಬಗ್ಗೆ. ನೋವು ನಲಿವಿನ ಬಗ್ಗೆ. ಮಾಡಿದ ಸಾಧನೆಯ ಬಗ್ಗೆ.ನೋಡಿದ ಸಿನಿಮಾದ ಬಗ್ಗೆ ಪುನೀತ್ ರಾಜ್ಕುಮಾರ್ ರವರ ಬಗ್ಗೆ.ಎಲ್ಲಕ್ಕಿಂತ ಮುಖ್ಯವಾಗಿ ಈ ಕನ್ನಡದ ಕೊಟ್ಯಧಿಪತಿಯ ಹಾಟ್ ಸೀಟಿಗೆ ಬರುವ ಉದ್ದೇಶದ ಬಗ್ಗೆ ಹೇಳಿಕೊಳ್ಳಿ ಎಂದಾಗ ಪುನೀತ್ ರಾಜ್ಕುಮಾರ್ ರವರ ಕಟೌಟನ ಮುಂದೆ ಹಾಕಿದ್ದ ಮ್ಯೆಕ್ ಮುಂದೆ ನಿಂತು ಅವರುಗಳು ಕೇಳಿದ ಎಲ್ಲಾ ವಿಚಾರವಾಗಿ ಹೇಳತೋಡಗಿದೆ. ಅತೀ ಹೆಚ್ಚು ಒತ್ತುಕೊಟ್ಟು ಮಾತಾಡಿದ್ದು ನನ್ನ ಮಗಳ ಆರೋಗ್ಯ ಸಮಸ್ಯೆಯ ಬಗ್ಗೆ ವಿವರವಾಗಿ ಮಾತಾಡಿದೆ. ಈ ಕಾರ್ಯಕ್ರಮ ನ್ನು ಅದೆಷ್ಟು ಇಷ್ಟಪಡುತ್ತೆನೆಂದು ಹೇಳಿದೆ.ನನ್ನ ಸಮಯ ಅದಾಗಲೇ ಇಪ್ಪತ್ತು ನಿಮಿಶ ಆಗಿತ್ತು....ಮೊದಲ ಬಾರಿ ಕ್ಯಾಮರಾದ ಮುಂದೆ ನಿಂತು ಮಾತನಾಡುವುದು ಅಂದ್ರೆ ಭಯ ಆತಂಕ ದುಗುಡು ಆಗುವುದು ಸಹಜ.ಇವುಗಳೆಲ್ಲದರ ಮದ್ಯೆ ನನ್ನ ವಿಟಿ ಮುಗಿಸಿದೆ.
ಅಲ್ಲಿದ್ದ ಇನ್ನೂ ಅನೇಕ ಜನ ತಮ್ಮ ಸರದಿಗಾಗಿ ಕಾಯುತ್ತಿದ್ದರು...
ವಿಡಿಯೋ ಮುಗಿಸುವ ಮುನ್ನ ನೀವು ಈ ಅಡೀಶನ್ ನಲ್ಲಿ ಆಯ್ಕೆ ಆದರೆ ನಿಮಗೆ ನಮ್ಮ ಕಡೆಯಿಂದ ಫೊನ್ ಬರುತ್ತದೆ ಅಷ್ಟೆ ಅಂದು ಕಳುಹಿಸಿದ್ದರು.ನಾನು ಇಂದು ನೆಡೆದ ಅಡೀಶನ್ ನಲ್ಲಿ ಗೆಲುವು ಸಾದಿಸುತ್ತೆನಾ?...ನನಗೆ ಫೊನ್ ಬರುತ್ತಾ? ಅನ್ನೋ ಪ್ರಶ್ನೆ ಇಟ್ಟುಕೊಂಡು ಮನೆಗೆ ಬಂದೆ.
ಸಂಪೂರ್ಣ ಮೇ ಜೂನ್ ಹಾಗೂ ಜುಲ್ಯೆ ತಿಂಗಳು ಕೆಳೆದರೂ ನನಗ್ಯಾವ ಫೋನ್ ಕನ್ನಡದ ಕೊಟ್ಯಧಿಪತಿ ಯಿಂದ ಬರಲೇ ಇಲ್ಲ.
ಆಗಲೇ ಕನ್ನಡದ ಕೊಟ್ಯಧಿಪತಿ  2019 ಪ್ರಸಾರವಾಗುತ್ತಿತ್ತು. ಮೊದಲನೇ ಎಪಿಸೋಡ್ ನ್ನು ಕಣ್ತುಂಬಿ ಕೊಂಡಿದ್ದೆ.
ನನ್ನ ನಂಬರ್ ಯಾವಾಗ ಬರುತ್ತೇ ಅಂತ ಕಾಯ್ತಾ ಇದ್ದೆ..ಕಾಯುವಿಕೆಗೆ ಒಂದು ತಾಳ್ಮೆಯೂ ಇರುತ್ತಲ್ಲ ಅದೂ ಸಹ ಮುಗಿದು ಹೊಗಿತ್ತು.
ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ನನ್ನ ವರ್ಕ್ ಬಗ್ಗೆ ಮಾತ್ರ ಗಮನಹರಿಸಿದ್ದೆ.ಆದರೆ ಸಮಯ ಸಿಕ್ಜಾಗಲೆಲ್ಲಾ VOOT ನಲ್ಲಿ ಪ್ರೊಗ್ರಾಮ್ ನೊಡುತ್ತಿದ್ದೆ.ಮೇ ಕಳೆದು ಜೂನ್ ಕಳೆದು ಜುಲ್ಯೆ ಕಳೆದು ಅಗಷ್ಟ್ ಪ್ರಾರಂಭವಾದರೂ ಯಾವುದೇ ಕಾಲ್ ಇರಲಿಲ್ಲ.
ಹೀಗಿರಬೇಕಾದರೆ
ಅಗಷ್ಟ್ ತಿಂಗಳ 8 ನೇ ತಾರಿಖಿನಂದು ಎಂದಿನಂತೆ ನಾನು ಬಸ್ಸ್ ನಲ್ಲಿ ನನ್ನ ಆಪೀಸಿಗೆ ಹೊರಟಿದ್ದೆ ದಾರಿಯ ಮದ್ಯೆ ಒಂದು ಕಾಲ್ ಬಂತು ರಿಸಿವ್  ಮಾಡಿಕೊಂಡೆ ನೀವು ವೆಂಕಟೇಶ ಬಾರ್ಕಿ ಅವರಾ? ಹೌದು ಅಂದೆ ನಾನು ಕನ್ನಡದ ಕೊಟ್ಯಧಿಪತಿ ಯಿಂದ ಮಾತನಾಡುತ್ತಿರುವುದು ನೀವು ಇದೇ ತಿಂಗಳ ಹದಿನ್ಯೆದರಿಂದ ಇಪ್ಪತ್ತನೇ ತಾರೀಖಿನೊಳಗೆ ಬೆಂಗಳೂರಿಗೆ ಬರಬೇಕಾಗುತ್ತದೆ ಶೂಟಿಂಗ್ ಗಾಗಿ ಅಂದ್ರು.
ಹೌದಾ ಆಯ್ತು ಬಿಡಿ ಅಂತ್ಹೇಳಿ ಫೊನ್ ಕಟ್ ಮಾಡಿದೆ.
ಯಾಕಂದ್ರೆ ನನಗೆ ಯಾರೂ ಚೀಟ್ ಮಾಡುತ್ತಿರಬಹುದೆಂದು ಅಂದು ಅದರ ಬಗ್ಗೆ ಗಮನ ಹರಿಸಲೇ ಇಲ್ಲ.
ಸಂಜೆ ಮತ್ತೊಮ್ಮೆ ಕರೆ ಮಾಡಿ ನಾವು ನಿಮ್ಮೊಂದಿಗೆ ಮಾತನಾಡಬೇಕು ನಾವು ಕನ್ನಡದ ಕೊಟ್ಯಧಿಪತಿ ಯಿಂದ
ಮಾತನಾಡುತ್ತಿರುವುದು ಯಾಕೆ ನಿಮಗೆ ಏನೂ ಅನಿಸುತ್ತಿಲ್ಲವಾ? ಖುಷಿ ಆಗಿಲ್ವಾ?
'ಅಭಿಜೀತ್ ಪುರೋಹಿತ್' ಕನ್ನಡದ ಕೊಟ್ಯಧಿಪತಿ ಯ ಮತ್ತೊಮ್ಮೆ ನನ್ನ ವಿವರಗಳನ್ನ ಪಡೆದುಕೋಳ್ಳುತ್ತಿದ್ದರು ನಾನೇನು ಅಂದು ಅಡೀಶನ್ ನಲ್ಲಿ ಹೇಳಿದ್ದೆನೋ ಅದನ್ನೇ ಮತ್ತೆ ಮತ್ತೆ ಕೇಳ್ತಾ ಇದ್ರೂ.
ನನ್ನ ಹಾಬಿ,
ಓದು - ಬರಹ,
ತಿಳಿದುಕೊಂಡಿರುವುದು,
ಇಷ್ಟವಾದ ಲೇಖಕ,
ಪುಸ್ತಕ. ಸಂಗೀತ,
ಸಿನಿಮಾ,
ಆಟ,
ಇಷ್ಟವಾದ ಸ್ಥಳ,
ಜೀವನದಲ್ಲಿ ನೆಡೆದ ಬಹುದೊಡ್ಡ ಘಟನೆ ಅದೂ ಏನೇ ಆಗಿರಬಹುದು ಹೀಗೆ ಸುಮಾರು 45 ನಿಮಿಷಗಳ ಕಾಲ ನನ್ನ ಇಂಟರ್ ವ್ಯೂ ಮಾಡುತ್ತಾರೆ ಫೊನ್ ನಲ್ಲಿಯೇ.
ಅದಾದ ನಂತರ ಮಾರನೇ ದಿನ ಮತ್ತೋಂದು ಕಾಲ್ ಬರುತ್ತೆ ನೀವು ಇದೇ ತಿಂಗಳ 20 ರಂದು ರೆಕಾರ್ಡ್ ಇದೆ ಬೆಂಗಳೂರಿಗೆ ಬರಬೇಕು ಅನ್ನುತ್ತಾರೆ. ನಿಮ್ಮ ಜೊತೆ ಬರುವವರ ಬಗ್ಗೆ ನಮಗೆ ಮಾಹಿತಿ ನೀಡಿ
ಅವರ ಹೆಸರು, ವಯಸ್ಸು, ಎಷ್ಟು ಜನ ನಿಮ್ಮೊಟ್ಟಿಗೆ ಕರೆ ತರುತ್ತಿರಿ?
ಹೀಗೆ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುತ್ತಾರೆ.
ಮತ್ತೆ ಮಾರನೇ ದಿನ ಫೊನ್ ಮಾಡಿ  ನಿಮಗಾಗಿ   #81, 1st Stage, 5th phase, West of cord road, Banglore10, Rajaji Nagar, Bangalore, Karnataka, 560010   REKHA RESIEDENCY
ನಲ್ಲಿ ರೂಂ ಬುಕ್ ಮಾಡಲಾಗಿದೆ  ರೂಂ ನಂಬರ್ 107.
ಉಳಿದುಕೊಳ್ಳೋ ಹೋಟೆಲ್ 
ಬೆಳಿಗ್ಗೆ 6 ಕ್ಕೆ  ನಮ್ಮ ಟೆಂಪೋ ಟ್ರಾವೆಲ್ ಬಂದು ನಿಮ್ಮನ್ನ  ಪಿಕ್ ಅಪ್ ಮಾಡುತ್ತೆ ಅಂದೇ ಬೆಳಿಗ್ಗೆ ನೀವು ರೂಂ ಖಾಲಿ ಮಾಡಿ ಸ್ಟುಡಿಯೋ ಗೆ ಬರಬೇಕು ಮತ್ತೆ ನಾವು ಫೋನ್ ಮಾಡುತ್ತೆವೆ ಎಂದು ಡಿಸ್ಕನೆಕ್ಟ್ ಮಾಡಿದರು..
ಇತ್ತ ನನಗೆ ಒಂದೇ ಸಮನೇ ಟೆನ್ಶೆನ್ ಆರಂಭಗೊಂಡಿತ್ತು.
ಮೊದಲ ಸಲ ಫೊನ್ ಮಾಡಿ ನಮ್ಮ ದೊಡ್ಟಕ್ಕನಿಗೆ ವಿಷಯ ತಿಳಿಸಿದ್ದೆ. ನಂತರ ದೊಡ್ಡಣನಿಗೆ ನೀವು ಸಿದ್ದಗೊಳ್ಳಿ ನನ್ನೊಂದಿಗೆ ಬೆಂಗಳೂರಿಗೆ ಬರಲು  ಅವರಿಗೆ ಸೂಚಿಸಿದೆ .
ಮತ್ತೋಮ್ಮೆ ಕರೆ ಮಾಡಿ ನಿಮ್ಮ ಡ್ರಸ್ಗಳು ಹೀಗೆಯೇ ಇರಬೇಕೆಂದು ಹೇಳಿದರು ಘಾಡ ಬಣ್ಣದ ಅಥವಾ ಚಕ್ಸ್ ಮತ್ತೂ ಬರಹವಿರುವ ಶರ್ಟ್ಗಳನ್ನು ತರಬೇಡಿ ಅವುಗಳನ್ನು ಇಲ್ಲಿ Not Allow.
ಶೂಟಿಂಗ್ ಒಂದೇ ದಿನ ನೆಡೆಯುತ್ತೆ ಪ್ರತಿ ನಾಲ್ಕು ಗಂಟೆಗೊಮ್ಮೆ ಡ್ರಸ್ ಚೇಂಜ್  ಮಾಡಬೇಕಾಗಬಹುದು  ಮತ್ತೆ ನಾವು ನಿಮಗೆ ಕರೆ ಮಾಡುತ್ತೇವೆಂದು ಹೇಳಿದರು.
ನಿರಂತರ ಅದ್ಯಯನ ಆರಂಭವಾಗಿ ತುಂಬಾ ದಿನಗಳೇ  ಆಗಿದ್ದವು
ಕನ್ನಡದ ದಿನ ಪತ್ರಿಕೆಗಳಾದ
ವಿಜಯವಾಣಿ
ವಿಜಯ ಕರ್ನಾಟಕ
ಸಂಯುಕ್ತ ಕರ್ನಾಟಕ
ಪ್ರಜಾವಾಣಿ
ಕನ್ನಡಪ್ರಭ
ಜನತಾವಾಣಿ
ವಿಶ್ವವಾಣಿ ಮತ್ತು ಹಾಯ್ ಬೆಂಗಳೂರ್ ! 

ಈ ಎಲ್ಲಾ ಪತ್ರಿಕೆಗಳನ್ಮ ರೆಫರ್ ಮಾಡುತ್ತಿದ್ದೆ.  ನನಗೊಂದು ಮತ್ತೊಂದು ಕರೆ ಬರುತ್ತದೆ
ಎನಾಯ್ತು?

ಹೇಗಾಯ್ತು?

Wait for some time for more information.
And much more details are available in this my own blog.
To be continue....
EPISODE - 21   Saturday 30-08-2019

EPISODE - 22   Sunday  31-08-2019





0 comments:

Post a Comment